ಅಸೈನ್ಮೆಂಟ್-10:
ಕೋವಿಡ್-19 ವೈರಸ್ ಹರಡುತ್ತೀರುವು ಈ ವಿಷಮ ಪರಸ್ತೀತಿಯಲ್ಲಿ (ಕರೋನಾ ಕಾಲದಲ್ಲಿ) ಶಾಲಾ ಮಕ್ಕಳ ಕಲಿಕೆ ಉತ್ಕೃಷ್ಟಗೊಸುವಲ್ಲಿ ( ಕಲಿಕಾ ಪ್ರಕ್ರಿಯೆಲ್ಲಿ ಸದಾ ತೊಡಗುವಂತೆ ಮಾಡಲು ) ತಮ್ಮ ಸಲಹೆ ಮತ್ತು ಕಾರ್ಯ ತಂತ್ರಗಳು :
ಶ್ರೀಮತಿ ಭಾರತಿ ಬಬಲೇಶ್ವರ . ಸ.ಶಿ .ಸ.ಹಿ.ಪ್ರಾ.ಶಾಲೆ ಕೆ.ಇ.ಬಿ.ಕಾಲೋನಿ ಸೇಡಂ
ಈ ಕೆಳಗೆ ಪಟ್ಟ ಮಾಡಿದ ಅಂಶಗಳು ಕರೋನಾ ಕಾಲದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಹಕಾರಿ
ಆಗಬಲ್ಲವು.
1. ವಿಷಯದ ಕಲಿಕೆಗೆ ಬೇಕಾದ ಪಾಠೋಪಕರಣ ತಯಾರಿಸುವುದು ಮತ್ತು ಕ್ರೂಢೀಕರಿಸುವುದು.
2. ಸ್ವವೇಗ-ಸ್ವಯಂಕಲಿಕೆ ನವೀನ ಕಲಿಕೆಗಾಗಿ ಕಂಪ್ಯೂಟರ್ ಆಧಾರಿತ ಶಿಕ್ಷಣ
3. ಟಾಲ್ಪ್ಆಧಾರಿತಿ ವಿಷಯ ಪಠ್ಯಾಧಾರಿತ ಇ-ಕಂಟೆಂಟ್ ತಯಾರಿಸುವದು
4 ತರಗತಿಯ ಮಕ್ಕಳ
ಸಂಪೂರ್ಣ ಮಾಹಿತಿ
ಸಂಗ್ರಹಿಸುವುದು (ಮೈಕ್ರೋಸಾಪ್ಟ್ / ಗೂಗಲ್ ಫಾರ್ಮ ಮೂಲಕ )
( ಮೋಬೈಲ ಸಂಖ್ಯೆ, ಬ್ಯಾಂಕ್
ಅಕೌಂಟ ಸಂಖ್ಯೆ, ಆಧಾರ ಸಂಖ್ಯೆಗಳು, ಜಾತಿ ಪ್ರಮಾಣ
ಪತ್ರ ಮತ್ತು ಸಂಖ್ಯೆ, ಆದಾಯ ಪ್ರಮಾಣ ಪತ್ರ ಮತ್ತು ಸಂಖ್ಯೆ , ಮಗು ವಾಸದ ವಿವಿರ ಪಾಲಕ ,ಪೋಷಕರ ವಿವರ ಮತ್ತು ಮೋಬೈಲ ಸಂಖ್ಯೆ
, ವಿದ್ಯಾರ್ಥಿಯ ಡೈರಿಗೆ ಬೇಕಾದ ಅಗತ್ಯ ದಾಖಲೆಗಳು, ವಾಟ್ಸ್
ಆಪ ಸಂಖ್ಯೆ/ ಮಾಹಿತಿ ವಿನಿಮಯಕ್ಕಾಗಿ / ಆನ್ ಲೈನ್
ತರಗತಿಗಳಿಗಾಗಿ ಗುಂಪು ಸಂದೇಶ
ದ ಮೋಬೈಲ ಸಂಖ್ಯೆ ಇತ್ಯಾದಿ ಮಾಹಿತಿ)
5. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು
ಗುರುತಿಸುವುದು ಮತ್ತು ಅವರನ್ನು ದತ್ತು ಪಡೆದ ಶಿಕ್ಷಕರಿಗೆ ಪಟ್ಟಿ
ಮಾಡಿ ಅವರ ಮಾಹಿತಿ ನೀಡುವುದು
6. ಮನೆಯಲ್ಲಿ ಓದಲು ಮಕ್ಕಳಿಗೆ ಪಠ್ಯ
ಪುಸ್ತಕ ಹಾಗು ವರ್ಕ್ ಬುಕ್ಕ್ ನೀಡುವುದು.
7. ಕನ್ನಡ / ಹಿಂದೀ ಭಾಷೆಯ ಪಠ್ಯದಲ್ಲಿರುವ
ಘಟಕ ಗಳನ್ನು ಓದುವಾಗ ಕಂಡುಬರುವ ಹೊಸ ಪದಗಳನ್ನು ಪಟ್ಟಿ ಅವುಗಳ ವಿರುದ್ಧಾರ್ಥ , ಸಮನಾರ್ಥಕ ಪದಗಳ
ಪಟ್ಟಿ ಮಾಡಲು ತಿಳಿಸುವದು.
8. ಘಟಕದಲ್ಲಿ ಬರುವ
ಪ್ರಾಸ ಪದಗಳು ಹಾಗು ಗಾದೆ ಮಾತುಗಳ ಪಟ್ಟಿ ತಯಾರಿಸಲು ಸಲಹೆ ನೀಡುವುದು.
9. ಕನ್ನಡ / ಹಿಂದೀ
ಭಾಷೆಯ ಪದ್ಯಗಳನ್ನು , ವಚನಗಳನ್ನು , ಜಾನಪದ ಗೀತೆಗಳನ್ನು
ಸಂಗ್ರಹಿಸಲು ಅಂದರೆ ಮನೆಯಲ್ಲಿರುವ ಅಜ್ಜ -ಅಜ್ಜಿ ಮತ್ತು ಹಿರಿಯರಿಂದ ಕೇಳಿ
ಸಂಗ್ರಹಿಸುವುದು.
10.
ಕನ್ನಡ / ಹಿಂದೀ ಭಾಷೆಯ ಪಾಠ ದಲ್ಲಿ ಬರುವ ಜೋಡಿ ನುಡಿಗಳ, ಅನುಕರಣಾವ್ಯಯಗಳ, ದ್ವಿರುಕ್ತಿಗಳ ಪಟ್ಟಿ ತಯಾರಿಸಲು ಹೇಳುವುದು.
ಉದಾ:
ಮಳೆ-ಬೇಳೆ ,ಹಣ್ಣು-ಹಂಪಲ
……..> ಜೋಡಿನುಡಿ
ಸರಸರ,
ಜುಳ ಜುಳು………..> ಅನುಕರಣಾವ್ಯಯಗಳ
ಹೌದು ಹೌದು, ಬಂದೆ ಬಂದೇ, ಬೇಡ ಬೇಡ
……..> ದ್ವಿರುಕ್ತಿ ..
11) ಮನೆಯಲ್ಲಿಯೇ ಶಿಕ್ಷಕರಾದ ನಾವು ಕಲಿಕೋಪರಣಗಳಾದ ಮಿಂಚುಪಟ್ಟಿ
, ಚಾರ್ಟ್, ನಕ್ಷೆ, ತಯಾರಿಸುವುದು ಅವುಗಳ ಸಹಾಯದಿಂದ ಆನ್ ಲೈನ್ ಪಾಠ ಮಾಡಬಹುದು ಹಾಗು ಶಾಲೆಯಲ್ಲಿ
ಪಾಠ ಬೋಧನೆಯಲ್ಲಿ ಬಳಸಬುದು.
12. ಯುಟುಬ್ ನಲ್ಲಿ ಈಗಾಗಲೇ ಲಭ್ಯ ವಿರುವ ಕನ್ನಡ ಭಾಷಾ ಕಲಿಕೆಗೆ
ಉಪಯುಕ್ತ ವಿಡಿಯೋಗಳನ್ನು
ವೀಕ್ಷಣೆ ಮಾಡುವುದು ಹಾಗು ಉತ್ತಮವಾದ ವಿಡಿಯೋ ಗಳನ್ನು ನಮ್ಮ ಬ್ಲಾಗ್ ಗಳಲ್ಲಿ ಸಂಗ್ರಹಿಸಿ ಮಕ್ಕಳ
ಗುಂಪಿಗೆ ಕಳುಹಿಸುವುದು.
13. ಕನ್ನಡ ಭಾಷಾ ಸಾಹಿತಿಗಳ ಮಾಡಿದ ಭಾಷಣ/ ಉಪನ್ಯಾಸಗಳನ್ನು ಸಂಗ್ರಹಿಸುವುದು ಮತ್ತು ಬ್ಲಾಗ್ ನಲ್ಲಿ ಸಂಗ್ರಹಿಸುವುದು.
14. ತರಗತಿಯ ಕನ್ನಡ ಭಾಷಾ ಪಾಠಗಳಲ್ಲಿ ಬರುವ ಐತಿಹಾಸಿಕ ಹಾಗು ಪಾರಂಪರಿಕ ಕಥೆ ಗಳಿಗೆ
ಸಂಭಾಷಣೆಗಳನ್ನು ಬರೆದು ಚಿಕ್ಕ-ಚಿಕ್ಕ ಪಾತ್ರಗಳ ಮೂಲಕ ನಾಟಕ ರಚನೆ ಮಾಡುವುದು
ಮತ್ತು ಇದನ್ನು ತರಗತಿಗಳಲ್ಲಿ ಪ್ಲೇ ಮಾಡುವುದು.
15.ಪಠ್ಯ ಹಾಗು ಪಠ್ಯ ಪೂರಕ ಸಾಹಿತ್ಯಗಳಿಗೆ ಸಂಭಾಷಣೆ ಮತ್ತು ಹಾಡಿನ ಧ್ವನಿ ಸುರಳಿಯನ್ನು
ತಯಾರಿಸಿ ಬ್ಲಾಗ್ ಹಾಗು ಗುಂಪಿಗೆ ಕಳುಹಿಸುವುದು.
16. ಅನೇಕ ಸಾಹಿತಿ ಹಾಗು ಸ್ವಾತಂತ್ರ್ಯ ಹೋರಾಟಗಾರ ಪರಿಚಯದ ಸಂಭಾಷಣೆ ಬರೆದು ಧ್ವನಿ –ಸುರುಳಿ ತಯಾರಿಸುವುದು ಹಾಗು ಸಂಗ್ರಹಿಸುವುದು.
17. ಪವರ್ ಪೈಂಟ್ ಪ್ರಜೆಂಟೇಶನ್ ಬಳಸಿ ತರಗತಿವಾರು ವಿಷಯಾಧಾರಿತ ರಸ ಪ್ರಶ್ನೆಗಳನ್ನು ಸಿಧ್ಧಪಡಿಸಿಕೊಂಡು ಬ್ಲಾಗ್ ಹಾಗು ಗುಂಪಿಗೆ ಕಳುಹಿಸುವುದು.
18. ಮಕ್ಕಳ ಮನೆಗೆ ಫೋನ ಮಾಡಿ ವ್ಯಾಟ್ಸ್ ಆಪ್ ಮೂಲಕ ಕಳುಹಿಸಿದ
ಪಾಠಗಳ ವೀಕ್ಷಣೆ ಬಳಿಕ ಮಗುವಿಗೆ ನೀಡಿದ ಮನೆಗೆಲಸ ಬಗ್ಗೆ ವಿಚಾರಿಸುದು ಮತ್ತು ಹಿಮ್ಮಾಯಿತಿ ನೀಡುವುದು.
19. ಮಕ್ಕಳಿಗೆ
ಗೂಗಲ ಮೀಟ್ ಮೂಲಕ ಸಹಪಾಠಿಗಳೊಂದಿಗೆ ತಾವು ಮಾಡಿದ ಮನೆಗೆಲಸ ಹಾಗು ನೋಡಿದ ವಿಡಿಯೋ ಗಳ ಬಗ್ಗೆ ಚರ್ಚಿಸಲು
ಅವಕಾಶ ನೀಡಿವುದು
20. ಮಕ್ಕಳು ತಾವು ಮಾಡುವ ಚಟುವಟಿಕೆ , ಬರವಣಿಗೆ ಯನ್ನು ಗುಂಪಿಗೆ ಹಾಕುವುದು
ಇದರಿಂದ ಇತರೆ ವಿದ್ಯಾರ್ಥಿಗಳು ಸ್ಪೂರ್ತಿ ಪಡೆಯುವರು.
ಚಂದನ ಟಿವಿಯಲ್ಲಿ
ಬರುವ ಶೈಕ್ಷಣಿಕ ಕಾರ್ಯಕ್ರಮಗಳಾದ
ಮಕ್ಕಳ ವಾಣಿ
, ಐತಿಹಾಸಿಕ ಸ್ಥಳ
ದರ್ಶನ , ಪೌರಾಣಿಕ ಕಥಾ ಕಾರ್ಯಕ್ರಮ ಮತ್ತು ಸೇತು ಬಂಧ
ಕಾರ್ಯಕ್ರಮಗಳನ್ನು ವೀಕ್ಷಣೆ
ಮಾಡಲು ತಿಳಿಸುವುದು.
No comments:
Post a Comment