Sunday, August 2, 2020

Assignments-01: Audio and video E-content preparation

Audio and video E-content preparation 

 

ಅಸೈನ್ಮೆಂಟ್-1

ಅಸೈನ್ಮೆಂಟ್-1

 

ಬೋಧಿಸುತ್ತೀರುವ ವಿಷಯಗಳ ಪರಿಕಲ್ಪನೆ ಮತ್ತು ವಿಷಯಗಳನ್ನು ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ ಮತ್ತು ವಿಡಿಯೋ ತಯಾರಿಕೆ

ಶಿಕ್ಷಕರ ಹೆಸರು

ಶ್ರೀಮತಿ ಭಾರತಿ ಬಬಲೇಶ್ವರ . .ಶಿ  ..ಹಿ.ಪ್ರಾ.ಶಾಲೆ ಕೆ..ಬಿ.ಕಾಲೋನಿ ಸೇಡಂ

ಬೋಧಿಸುವ ವಿಷಯ

4ನೇ-7ನೇ ಕನ್ನಡ ಮತ್ತು 7ನೇ ಹಿಂದೀ

 

ಕ್ರ.ಸಂ

ತರಗತಿ/ವಿಭಾಗ

ಬೋಧಿಸುತ್ತೀರುವ ವಿಷಯಗಳ ಪರಿಕಲ್ಪನೆ ಮತ್ತು ವಿಷಯಗಳನ್ನು ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ ಮತ್ತು ವಿಡಿಯೋ ತಯಾರಿಕೆ ಮಾಡಿದ ವಿವರ

ಅಡಿಯೋ/ ವಿಡಿಯೋ

ಲಿಂಕ್

ಸಿದ್ಧಪಡಿಸಿದ ದಿನಾಂಕ

ಷರಾ

01

 

 

4ನೇ ಕನ್ನಡ

ಅಡಿಯೋ / ವಿಡಿಯೋ

ಕನ್ನಡ ವರ್ಣಮಾಲೆಗಳ ಪರಿಚಯ

https://youtu.be/SIGMyK7I6Rc

20/07/2020

 

02

 

 

5ನೇ ಕನ್ನಡ

ಅಡಿಯೋ ತಯಾರಿಸಿದೆ:

ವಿರುದ್ಧ ಪದಗಳ ಪರಿಚಯ

https://youtu.be/7FKKxUF5zqo

22/07/202

 

03

 

 

6ನೇ ಕನ್ನಡ

ಅಡಿಯೋ ತಯಾರಿಸಿದೆ:

ದೊಡ್ಡವರದಾರಿ

class videos and ppt\ಗದ್ಯಭಾಗ ೧.ದೊಡ್ಡವರ ದಾರಿ -6th standard lesson 1.mp4

25/07/2020

 

04

 

 

7ನೇ ಕನ್ನಡ

ವಿಡಿಯೋಮಿಂಚುಪಟ್ಟಿ ಮೂಲಕ

ಕನ್ನಡ ವ್ಯಾಕರಣಾಂಶ

class videos and ppt\Kannada grammar - vyakarana Kannada - Kannada vyakarana.mp4

28/07/2020

 

05

 

 

7ನೇ ಹಿಂದಿ

ವಿಡಿಯೋ

ಹಿಂದೀ ಶಬ್ದಗಳು ಓದುವುದು.

https://youtu.be/xJjzPnW91ug

31/07/2020

 

06

 

 

 

 

 

 

 

 

 

ಶಿಕ್ಷಕರ ಸಹಿ                                                                                            ಮುಖ್ಯ ಗುರುಗಳ ಸಹಿ

ಭಾರತಿ ಬಬಲೇಶ್ವರ

Assignment-02 Unit plans



Unit plans

Assignment -03 communication with child

https://drive.google.com/file/d/1n4TY1AP_zvUBHMh2J9xBvM8K_QFM554M/view?usp=sharing

Assignment-04 teaching Aids preparation

https://drive.google.com/file/d/15vYRcdU6cunMHQnJUdfkPUs0ZQmxtfhO/view?usp=sharing

https://drive.google.com/file/d/1r7iHHdi6dNFbB0qJkO0_QAI-9vVORjl-/view?usp=sharing






























Assignment -05 :Watched video and Audio content of subjects


Watched video and Audio content of subjects 

https://drive.google.com/file/d/1b7iqM2o1RquvjXNf0Q7rLLtgGQeFB60r/view?usp=sharing

Assignment-06 : Discussion with other teacher regarding e-content preparation

https://drive.google.com/file/d/1HLz5j09DZc8dxP2WDtqygaKoqEBZQOHH/view?usp=sharing

Assignment-07 : Bridge cousre Questions and plans


BRIDGE COURSE QUESTION PAPERS AND PLANS

https://drive.google.com/file/d/1aQFVRHDRD6Q4YVbVGz_Xbizz9fq1N17S/view?usp=sharing

Assignment -08:QUIZ BAnk peparation


QUIZ BAnk peparation


https://drive.google.com/file/d/14DxeDE0F1-oW78akZ5XuR5tHU08MSlOp/view?usp=sharing

Saturday, August 1, 2020

Assignment 9 :COVID-19 ರ ಸಮಯದಲ್ಲಿ ಮನೆಯಿಂದಲೇ ಕೆಲಸದಡಿ ನಮ್ಮ ವೃತ್ತ ನೈಪುಣ್ಯತೆ ಕುರಿತಂತೆ 400 ಪದಗಳ ಲೇಖನ

ಅಸೈನ್ಮೆಂಟ್-9:

 

ಶ್ರೀಮತಿ ಭಾರತಿ ಬಬಲೇಶ್ವರ . .ಶಿ  ..ಹಿ.ಪ್ರಾ.ಶಾಲೆ ಕೆ..ಬಿ.ಕಾಲೋನಿ ಸೇಡಂ

 

                          COVID-19 ರ ಸಮಯದಲ್ಲಿ ಮನೆಯಿಂದಲೇ ಕೆಲಸದಡಿ ನಮ್ಮ ವೃತ್ತಿ

                             ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ 400 ಪದಗಳ ಲೇಖನ

 

             ಪ್ರಸ್ತುತ ಸವಾಲುಗಳ ನಡುವೆ ಪೋಷಕರು ಮತ್ತು ಶಿಕ್ಷಕರು ಹೊಸ ಸಮತೋಲನವನ್ನು ಮತ್ತು ಕಲಿಕೆಗೆ ಹೊಸ ಆಯಾಮ ವನ್ನು ಕಂಡುಕೊಳ್ಳಬೇಕು ಮತ್ತು ಸ್ಥಾಪಿಸಬೇಕು

ನಮಗೆ ತಿಳಿದಿರುವಂತೆ ಜಗತ್ತು ಕಣ್ಣು ಮಿಟುಕಿಸುವುದರಲ್ಲಿ ಬದಲಾಗಿದೆ. ರಾತ್ರಿಯಿಡೀ ಶಾಲೆಗಳು ಮುಚ್ಚಲ್ಪಟ್ಟವು, ವಿದ್ಯಾರ್ಥಿಗಳನ್ನು ಶಾಲೆಗಳಿಂದ ಮುಕ್ತಗೊಳಿಸಲಾಯಿತು (ಆದರೆ ಅವರ ಮನೆಗಳಿಗೆ ಮಾತ್ರ ಸೀಮಿತವಾಗಿದೆ), ಮತ್ತು ಮಕ್ಕಳನ್ನು , ಮಕ್ಕಳ ಮನೆಯಲ್ಲಿ ಸೇರಿಸುವುದರೊಂದಿಗೆ ಪೋಷಕರು ಹಿಡಿತ ಸಾಧಿಸಬೇಕಾಯಿತು. ಲಾಕ್‌ಡೌನ್, ಹ್ಯಾಂಡ್‌ವಾಶ್ ಮತ್ತು ವೈರಸ್‌ನ ಜಾಗತಿಕ ಹರಡುವಿಕೆಯನ್ನು ಪತ್ತೆಹಚ್ಚುವ ಒತ್ತಡದಲ್ಲಿ, ಆಗಾಗ್ಗೆ ನಿರ್ಲಕ್ಷಿಸಲ್ಪಟ್ಟ ಗುಂಪಿನ ಶಿಕ್ಷಕರ ಮೇಲೆ ಹಠಾತ್ ಒತ್ತಡವನ್ನು ಯಾರೂ ಗಮನಿಸಲಿಲ್ಲ. ಶಾಲೆಗಳು ವಿಸ್ತೃತ ಅವಧಿಗೆ ಮುಚ್ಚಲ್ಪಟ್ಟಿದ್ದರಿಂದ ಆನ್‌ಲೈನ್ ಬೋಧನೆಯ ವಾಸ್ತವವಾಯಿತು. ಇದ್ದಕ್ಕಿದ್ದಂತೆ, ಇದು ಇನ್ನು ಮುಂದೆ  ಆನ್ ಲೈನ್ ಅಲಂಕಾರಿಕ  ಪದವಾಗಿರಲಿಲ್ಲ. ಈಗ ಎಲ್ಲರೂ ಇದನ್ನು ಮಾಡಬೇಕು. ಸಮಸ್ಯೆಯ ನಡುವೆಯು ಶಿಕ್ಷಣದ ರಥ ಶಿಕ್ಷಕ ಮುನ್ನೋಯ್ಯಬೇಕಾಗಿದೆ.  ಚೀನಾ ದಾಳಿ, ನೆರೆಯ ಪಾಕಿಸ್ತಾನದ ದಾಳಿ, ಕರೋನಾ , ಮಳೆ ಪ್ರವಾಹ ಮೆಟ್ಟಿ ನಿಂತು ವಿಶ್ವವನ್ನು ಮುನ್ನಡೆಸುವ  ಸರಿಯಾದ ದಿಕ್ಕಿನಲ್ಲಿ ಕೊಂಡು ಹೊಗುವ ಜವಾಬ್ದಾರಿ ಭಾರತದ ಮೇಲಿದೆ.

             ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದ್ದು ದೇಶ ಹಾಗು  ರಾಷ್ಟ್ರದ ಅಭ್ಯುದಯಕ್ಕೆ ಕೊಡುಗೆ  ನೀಡುವಲ್ಲಿ ಶಾಲಾ ಶಿಕ್ಷಣದಲ್ಲಿ  ತಂತ್ರಜ್ಞಾನಸಮೂಹ ಮಾದ್ಯಮ ಬಳಕೆಯ ಮೂಲಕ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಫಲರಾಗೋಣ.

    

  ಈ ನಿಟ್ಟಿನಲ್ಲಿ ಕರೋನಾ ಕಾಲದ ಬಿಡುವಿನ ಸಮಯದಲ್ಲಿ ಶಿಕ್ಷಕರಾದ ನಾವು ನಮ್ಮ ಬೋಧನಾ ನೈಪುಣ್ಯ ಹೆಚ್ಚಿಸಿಕೊಳ್ಳಲು ಕೈಗೊಳ್ಳಬಹುದಾದ  ಚಟುವಟಿಕೆಗಳಂದರೆ :

1.     ವಿಷಯದ ಕಲಿಕೆಗೆ ಬೇಕಾದ ಪಾಠೋಪಕರಣ ತಯಾರಿಸುವುದು ಮತ್ತು  ಕ್ರೂಢೀಕರಿಸುವುದು.

2.   ಸ್ವವೇಗ-ಸ್ವಯಂಕಲಿಕೆ- ಸಹ ಭಾಗಿತ್ವದ ಮತ್ತು ನವೀನ ಕಲಿಕೆಗಾಗಿ ಕಂಪ್ಯೂಟರ್ ಆಧಾರಿತ ಶಿಕ್ಷಣದ ಪರಿಕಲ್ಪನೆ ಅರ್ಥೈಯಿಸಿಕೊಳ್ಳುವುದು.

3.    ವಿಷಯಗಳ ಪಠ್ಯಾಧಾರಿತ  -ಕಂಟೆಂಟ್ ತಯಾರಿಸುವದು

4.    ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸುವುದು  ಮತ್ತು  ಅವರನ್ನು ಮುಖ್ಯವಾಹಿನಿಗೆ ತರಲು ಇರುವ ಮಾರ್ಗಗಳ ಬಗ್ಗೆ ಇಲಾಖೆ ಸಾಹಿತ್ಯ ಸಂಗ್ರಹಿಸುವದು, ಉದಾಹರಣೆಗಾಗಿ ಓದು ಕರ್ನಾಟಕ ಪುಸ್ತಕ

5. ಮಕ್ಕಳಿಗಾಗಿ ಇರುವ ಪಠ್ಯ ಪುಸ್ತಕ ಹಾಗು ವರ್ಕ್ ಬುಕ್ಕ್ ಗಳನ್ನು ಅದರಲ್ಲಿ ನೀಡಿದ ವಿಷಯಾಂಶ ವನ್ನು ಅರ್ಥೈಯಿಸಿಕೊಳ್ಳುವುದು.

5.   ಕನ್ನಡ ಭಾಷೆಯ ಪಠ್ಯದಲ್ಲಿ ಘಟಕ ಗಳನ್ನು ಓದುವಾಗ ಕಂಡುಬರುವ  ಹೊಸ ಪದಗಳನ್ನು ಪಟ್ಟಿ ಅವುಗಳ ವಿರುದ್ಧಾರ್ಥ , ಸಮನಾರ್ಥಕ ಪದಗಳ ಪಟ್ಟಿ ಮಾಡುವುದು.

6.   ಘಟಕದಲ್ಲಿ ಬರುವ  ಪ್ರಾಸ ಪದಗಳು ಹಾಗು ಗಾದೆ ಮಾತುಗಳ ಪಟ್ಟಿ ಮಾಡುವುದು.

7.    ಕನ್ನಡ ಪದ್ಯಗಳನ್ನು , ವಚನಗಳನ್ನು , ಜಾನಪದ ಗೀತೆಗಳನ್ನು ಸಂಗ್ರಹಿಸಲು ಅಂದರೆ ಮನೆಯಲ್ಲಿರುವ ಅಜ್ಜ -ಅಜ್ಜಿ ಮತ್ತು ಹಿರಿಯರಿಂದ ಕೇಳಿ ಸಂಗ್ರಹಿಸುವುದು.

8.   ಕನ್ನಡ ಪಾಠ ದಲ್ಲಿ ಬರುವ ಜೋಡಿ ನುಡಿಗಳ, ಅನುಕರಣಾವ್ಯಯಗಳ, ದ್ವಿರುಕ್ತಿಗಳ ಪಟ್ಟಿ ತಯಾರಿಸಲು ಹೇಳುವುದು.

ಉದಾ:  ಮಳೆ-ಬೇಳೆ   ,ಹಣ್ಣು-ಹಂಪಲ ……..> ಜೋಡಿನುಡಿ

    ಸರಸರ, ಜುಳ ಜುಳು………..>  ಅನುಕರಣಾವ್ಯಯಗಳ

             ಹೌದು ಹೌದು, ಬಂದೆ ಬಂದೇ, ಬೇಡ ಬೇಡ ……..> ದ್ವಿರುಕ್ತಿ ..

 

9.   ಮನೆಯಲ್ಲಿಯೇ ಶಿಕ್ಷಕರಾದ ನಾವು  ಕಲಿಕೋಪರಣಗಳಾದ ಮಿಂಚುಪಟ್ಟಿ , ಚಾರ್ಟ್, ನಕ್ಷೆ,     

ತಯಾರಿಸುವುದು ಅವುಗಳ ಸಹಾಯದಿಂದ  ಆನ್ ಲೈನ್ ಪಾಠ ಮಾಡಬಹುದು ಹಾಗು ಶಾಲೆಯಲ್ಲಿ ಪಾಠ ಬೋಧನೆಯಲ್ಲಿ ಬಳಸಬಹುದು.

10.       ಯುಟುಬ್ ನಲ್ಲಿ  ಈಗಾಗಲೇ ಲಭ್ಯ ವಿರುವ ಕನ್ನಡ ಭಾಷಾ ಕಲಿಕೆಗೆ ಉಪಯುಕ್ತ  ವಿಡಿಯೋಗಳನ್ನು

ವೀಕ್ಷಣೆ ಮಾಡುವುದು ಹಾಗು ಉತ್ತಮವಾದ ವಿಡಿಯೋ ಗಳನ್ನು ನಮ್ಮ ಬ್ಲಾಗ್ ಗಳಲ್ಲಿ ಸಂಗ್ರಹಿಸಿ ಮಕ್ಕಳ ಗುಂಪಿಗೆ ಕಳುಹಿಸುವುದು.

ಕನ್ನಡ ಭಾಷಾ ಸಾಹಿತಿಗಳ ಮಾಡಿದ ಭಾಷಣ/ ಉಪನ್ಯಾಸಗಳನ್ನು ಸಂಗ್ರಹಿಸುವುದು ಮತ್ತು ಬ್ಲಾಗ್ ನಲ್ಲಿ ಸಂಗ್ರಹಿಸುವುದು.

        14. ತರಗತಿಯ ಕನ್ನಡ ಭಾಷಾ ಪಾಠಗಳಲ್ಲಿ ಬರುವ  ಐತಿಹಾಸಿಕ ಹಾಗು ಪಾರಂಪರಿಕ ಕಥೆ ಗಳಿಗೆ ಸಂಭಾಷಣೆಗಳನ್ನು ಬರೆದು ಚಿಕ್ಕ-ಚಿಕ್ಕ ಪಾತ್ರಗಳ ಮೂಲಕ ನಾಟಕ ರಚನೆ ಮಾಡುವುದು ಮತ್ತು  ಇದನ್ನು ತರಗತಿಗಳಲ್ಲಿ  ಪ್ಲೇ ಮಾಡುವುದು.

15.ಪಠ್ಯ ಹಾಗು ಪಠ್ಯ ಪೂರಕ ಸಾಹಿತ್ಯಗಳಿಗೆ  ಸಂಭಾಷಣೆ ಮತ್ತು ಹಾಡಿನ ಧ್ವನಿ ಸುರಳಿಯನ್ನು ತಯಾರಿಸಿ ಬ್ಲಾಗ್ ಹಾಗು ಗುಂಪಿಗೆ  ಕಳುಹಿಸುವುದು.

16. ಅನೇಕ ಸಾಹಿತಿ ಹಾಗು ಸ್ವಾತಂತ್ರ್ಯ ಹೋರಾಟಗಾರ ಪರಿಚಯದ  ಸಂಭಾಷಣೆ ಬರೆದು ಧ್ವನಿಸುರುಳಿ ತಯಾರಿಸುವುದು ಹಾಗು ಸಂಗ್ರಹಿಸುವುದು.

17. ಪವರ್ ಪೈಂಟ್ ಪ್ರಜೆಂಟೇಶನ್ ಬಳಸಿ ತರಗತಿವಾರು    ವಿಷಯಾಧಾರಿತ  ರಸ ಪ್ರಶ್ನೆಗಳನ್ನು ಸಿಧ್ಧಪಡಿಸಿಕೊಂಡು  ಬ್ಲಾಗ್ ಹಾಗು ಗುಂಪಿಗೆ  ಕಳುಹಿಸುವುದು.

18. ಮಕ್ಕಳ ಸಾಹಿತ್ಯ ಗಳಾದ ಶಿಶು ಗೀತೆಗಳು, ದುರ್ಗಸಿಂಹನ ಪಂಚತಂತ್ರದ ಕಥೆಗಳು, ತೆನಾಲಿರಾಮಕೃಷ್ಣನ ಕಥೆಗಳು, ಲಾವಣಿಗಳು, ಇತ್ಯಾದಿ ಗಳನ್ನು ಸಂಗರಹಿಸುವುದು.

19. ಇಲಾಖೆ ವತಿಯಿಂದ ನಡೆಯುವ ಆನ್ ಲೈನ್ ತರಬೇತಿಗೆ ಹಾಜರಾಗುವುದು ಮತ್ತು ವಿಷಯ ಸಂಪದೀಕರಣ  ಮಾಡುವುದು

20.  ಚಂದನವಾಹಿನಿಯಲ್ಲಿ ಬರುವ ಮಕ್ಕಳವಾಣೀ / ಸೇತುಬಂಧ ಕಾರ್ಯಕ್ರಮ ವೀಕ್ಷಣೆ ಮೂಲಕ  ಸಂಪನ್ಮೂಲ ಶಿಕ್ಷಕರು ಕಾರ್ಯಕ್ರಮದಲ್ಲಿ ಕೈಗೊಳ್ಳುವ ಚಟುವಟಿಕೆ ಯನ್ನು ಗಮನಿಸುವದು ಮತ್ತು ಅಂತಹ ಚಟುವಟಿಕಗಳನ್ನು ಶಾಲಾ ತರಗತಿ ಕೋಣೆಗೆ ಸೂಕ್ತವಾದ ಮಾರ್ಪಾಡು ಮಾಡಿಕೊಂಡು ತಯಾರಿಸಲು ಟಿಪ್ಪಣಿ ಮಾಡುವುದು.

 

ಒಟ್ಟಾರೇ ಗುಣಾತ್ಮಕ ಶಿಕ್ಷಣ ನೀಡಲು ಬೇಕಾದ ಸಾಹಿತ್ಯ ಹಾಗು ಯೋಜನೆಗಳನ್ನು  ವಿವಿಧ ಮೂಲಗಳಿಂದ  ಕೇಳಿ , ನೋಡಿ ಅರ್ಥೈಯಿಸಿಕೊಳ್ಳುವ ಮೂಲಕ  ನಮ್ಮ ಬೋಧನಾ ನೈಪುಣ್ಯವನ್ನು ಹೆಚ್ಚಿಸಿಕೊಳ್ಳುವುದು.

ಆಮೂಲಕ ಭವ್ಯ ಭಾರತದ ನಿರ್ಮಾಣದಲ್ಲಿ ಶಿಕ್ಷಣದ (ಜ್ಞಾನದ) ಕೈ ಜೋಡಿಸೋಣ

 

ಗೋಪಾಲಕೃಷ್ಣ ಅಡಿಗರು ಹೇಳಿದಂತೆ ;

ಹಳೆ ಬೇರು ಹೊಸ ಚಿಗುರು

ಕೂಡಿರಲು ಮರ ಸೊಬಗು.

ಎಂಬ ಮಾತಿನಂತೆ  ನವನವೀನ ತಂತ್ರಜ್ಞಾನ ಅರಿತು  ಅದನ್ನು ಬೋಧನೆಯಲ್ಲಿ ಬೆರೆಸಿ ಮಕ್ಕಳಿಗೆ ಪಾಠದ ಮೂಲಕ        

                                                       ಊಣ ಬಡಿಸೋಣ.                

      ಪದಗಳ ಸಂಖ್ಯೆ :539

  

 

 

 

  

 

 

 


Assignments-01: Audio and video E-content preparation

Audio and video E-content preparation    ಅಸೈನ್ಮೆಂಟ್ -1 ಅಸೈನ್ಮೆಂಟ್ -1   ಬೋಧಿಸುತ್ತೀರುವ ವಿಷಯಗಳ ಪರಿಕಲ್ಪನೆ ಮತ್ತು ವಿಷಯಗಳನ್...